Sunday, July 28, 2013

Sunday, March 31, 2013

a new painting...

acrylic on canvas (24" x 30")

Tuesday, August 14, 2012

Thursday, March 22, 2012

Reproduction - Acrylic on Canvas (30" x 20")

Original by Milind Mulik

ಯುಗಾದಿ ಹಬ್ಬದ ಶುಭಾಶಯಗಳು!

Thursday, January 05, 2012

behind the door...

acrylic on canvas (2x 18" x 36")

Tuesday, December 27, 2011

waiting

acrylic on canvas (18" x 24")

Wednesday, April 27, 2011

Sunday, April 10, 2011

Lost in Thought!

Reproduction- Acrylic on canvas (18" x 36")

Sunday, January 02, 2011

virtues of life!

acrylic on canvas (24" x 30")

Life is a journey with happy and sad moments. We live like puppet man’s puppets. Puppet man (Sitting) is envisaged as “God / Supreme Power” here.

The puppet’s or small dolls are “Us - the Human beings” who have less control of things happening around us. Though “We- The Dolls” seem to be in a complete control of things around us, there is “Someone” else who is controlling the overall affair of things.

Hence “Virtues of Life” tends to imagine, how each one of us behave in a complex society.


The people around us react to “Us” based on what they perceive of “Us”. However these Virtues /Actions are controlled by Supreme Power.


ಬದುಕು ಒಳಿತು ಮತ್ತು ಕೆಡುಕಿನ ಕ್ಷಣಗಳ ಸಂಗಮ. ನಾವೆಲ್ಲ ಸೂತ್ರಧಾರನ ಸೂತ್ರದ ಬೊಂಬೆಗಳು. ಚಿತ್ರದಲ್ಲಿ ಸೂತ್ರಧಾರ (ಕುಳಿತಿರುವವನು)ನನ್ನು ಬದುಕಿನ ಅದಮ್ಯ ಶಕ್ತಿಗೆ, ಭಗವಂತನಿಗೆ ಹೋಲಿಸಲಾಗಿದೆ. ಚಿಕ್ಕ ಚಿಕ್ಕ ಗೊಂಬೆಗಳೆಲ್ಲಾ ಹುಲು ಮಾನವರಂತೆ; ಸೂತ್ರಧಾರನ ಕೈನಲ್ಲೇ ಆಟವಿರುವುದು. ಗೊಂಬೆಗಳೆಲ್ಲಾ ತಾವು ಸ್ವತಂತ್ರರು ಎಂಬ ಪರಿಭಾವನೆಯಲ್ಲೇ ಇದ್ದರೂ ನಿಜದಲ್ಲಿ ಆ ಸೂತ್ರವೆಲ್ಲ ಗೊಂಬೆಗಳನ್ನ ಮೀರಿದ ಅದೃಶ್ಯ ಶಕ್ತಿಯ ಕೈಯಲ್ಲಿದೆ. ಪ್ರತಿಯೊಂದು ಗೊಂಬೆಯೂ ಇನ್ನೊಂದು ಗೊಂಬೆಯ ಬಗ್ಗೆ ತನ್ನದೇ ಪರಿಕಲ್ಪನೆಗಳನ್ನ ಇಟ್ಟುಕೊಂಡಂತೆ ಕಾಣುತ್ತದೆ. ಬದುಕಿನ ಸಹಜತೆಯ ಈ ಕಲಾಕೃತಿ ಮನುಷ್ಯ ಮೀತಿಯನ್ನ ಸಹನೆಯಿಂದ ನೋಡಲು ಪ್ರೇರೆಪಿಸುತ್ತದೆ.

acrylic on canvas (12" x 12")

Wednesday, July 07, 2010

Friday, January 01, 2010

apoG

acrylic on canvas 24" x 30"

Friday, December 25, 2009

ಸಾಂಬ ಹಡೆದ ಒನಕೆ!

ಹೊಸ ವರ್ಷದ ಸಂಭ್ರಮದಲ್ಲೊಂದು ಕಾವ್ಯಕುಸುರಿ
ಕವನ ಸಂಕಲದಲ್ಲಿನ ಎರಡು ಕವಿತೆಗಳು ಓದುಗರ curiosityಗೆ...
ಹುಡುಕುತ್ತಿದ್ದೇನೆ
ಹುಡುಕುತಿದ್ದೇನೆ-
ತೂತು ಬಿದ್ದ ಮಾತುಗಳಲ್ಲಿ
ಗೋತಾ ಹೊಡೆದ ಅರ್ಥಗಳನ್ನು.
ಗಡಿಯಾರ ಕ್ಯಾಲೆ೦ಡರುಗಳಲ್ಲಿ
ಕಳೆದು ಹೋದ ಸಮಯವನ್ನು.
ಮಾರುದ್ದ ಡಿಗ್ರಿಗಳ
ಗೇಣುದ್ದ ಕಾಗದದಲ್ಲಿ
ಲಯವಾದ ‌‍‌‌ ‍‍ಜ್ಞಾನವನ್ನು.
ಗರಿ-ಗರಿಯಾದ ನೋಟುಗಳಲ್ಲಿ
ಕದ್ದು ಹೋದ ಶ್ರಮವನ್ನು;
ಮತ್ತೆ-ಹಿಡಿದರೂಹಿಡಿಯದೆ;
ತಿರುಗಿದರೂತಿರುಗಿಸದೆ
ಮರ ಮರಳಿಬಿಗಿದಪ್ಪುವ
ಹಸಿರು ಮಾತೆಯ-
ಮಮತೆಯ ಮೂಲವ!

ಶೇಷ ಪ್ರಶ್ನೆ
ಇದು ಹೀಗೇ ಎ೦ದು ಹೇಗೆ ಹೇಳುವುದು ಮಗು?
ಆದರೂ ಬೆನ್ನು ಬಿಡಲೊಲ್ಲ ನಚಿಕೇತ.
ಬೆಳಕಿನ ಪ್ರಶ್ನೆಗೆ ಅ೦ತಕನೆ ಪರಾರಿ
ಆದರೂ ತಪ್ಪಲಿಲ್ಲ ಪ್ರಭಾತಫೇರಿ .
ಬ೦ದವರೆಷ್ಟೋ ಜನ ಆಚಾರ್ಯರು
ಶ೦ಕರ ಬುದ್ಧ ರಾಮಾನುಜರು
ಚಾರ್ವಾಕ ಸಾರ್ತ್ರೆ ಹೆಗಲ್ಲರ ಸಾಲು ಸಾಲು
ಆದರೂ ಸೋಲಿಗಿಲ್ಲಿಲ್ಲ, ಸೋಲು.
ಸಾ೦ಬ ಹಡೆದ ಈ ಒನಕೆ
ಮಾರಕ ಕೃಷ್ಣ ವಿಲಾಸಕೆ.
ಓಯಸಿಸ್ ಬೆಡಗಿಯ ಹಸಿರು ಸೀರೆಯ ತು೦ಬ
ಬಣ್ಣ ಬಣ್ಣದ ಹೂವುಗಳ ಚಿತ್ತರ ಚಿತ್ತಾರ.
ಕಣ್ಣಲ್ಲಿ ಕಾಮನ ಬಿಲ್ಲು,
ಕೆಳಗೆ ಬೆಳ್ಳಕ್ಕಿ ಸಾಲು.
ವಿಶಾಲ ಮೈದಾನದಲ್ಲಿ
ಕಗ್ಗತ್ತಲೆಯ ಗುಹೆಯ ದಾರಿ
ಎಲ್ಲಿಗೆ ಸವಾರಿ?
ಇ೦ದ್ರ ನಗರಿ? ಬ್ರಹ್ಮಪುರಿ?
ಇಲ್ಲಾ ಯಮಪುರೀ?
ಗೊತ್ತಿಲ್ಲಾ!
ಮೇಲೆ ಆಗಸದಲ್ಲಿ ಹೊಳೆವ ರನ್ನದ ತಟ್ಟೆ
ಕೆಳಗೆ ನೆಲದ ಮೇಲೆ ಮರಳು ಗಾಜಿನ ಬಟ್ಟೆ.
ತಲೆ ಚಿಪ್ಪು ಬೆಲ್ಲದಾಲೆಯ ಮನೆ;
ಚಿಟ್ ಚಿಟಿಲ್ ಕಟ್ ಕಟಿಲ್ ಕರ್ರೊ ಮುರ್ರೋ
ಬೆ೦ಕಿ ಬೆಳಕಲ್ಲಿ ಹೊಗೆ ಮೋಡ ವಿಲಾಸ;
ಕೆಸರ ಗದ್ದೆಯ ಕಾಳೂ ಜೊಳ್ಳು ಜೊಳ್ಳು.
ಮತ್ತೆ ಮತ್ತೆ ಗಾಣಕ್ಕೆ ಕುತ್ತಿಗೆ;
ಹೊರಗಾಗಲೆ೦ದು ಹಾಕಿದ ದಾಪುಗಾಲು
ವೃತ್ತದ ಸುತ್ತ ಚಕ್ರದ ನಡಿಗೆ
ದಾರಿ ಸವೆಸಿದ್ದು ಶೂನ್ಯ.
ಕಾಗೆಗಳ ಕೂಗುಗಳ ನಡುವೆ
ವೇದ ಘೋಷಗಳ ಭಾರಿ ಮ೦ತ್ರ.
ಜಾಗತೆಗಳ ಢಣ ಢಣ
ಕರ್ಪೂರದಾರತೆಯ ಬೆಳಕಲ್ಲಿ,
ಮೂರ್ತಿಗೆ ಅಡ್ಡವಾದ
ಪುರೋಹಿತನ ಪೂರ್ತಾ ಹೊಟ್ಟೆ
ಅದರ ಸುತ್ತ
ಈದಿಪಸ್ಸನ ಕ್ಷಾತ್ರವೀರ್ಯದ ಬ್ರಹ್ಮ ಗ೦ಟು.
ಕಗ್ಗತ್ತಲೆಯ ಗುಹೆಯಲ್ಲಿ ಕುಳಿತು
ಯೋಗ ನಿದ್ರೆಯಲಿ ಮೈಮರೆತು
ಬೆಳಕ ರೇಕುಗಳ ಕ೦ಡು
ಆಹಾ ! ಇದಮ್ ಇತ್ತಮ್
ಎ೦ದು ಕಣ್ಣು ಬಿಟ್ಟಾಗ;
ಯುರೇಕಾಗಿರಿಯಿ೦ದ ಜಾರಿ
ಗೊಬ್ಬರದ ಗು೦ಡಿಗೆ ಹಾರಿ
ಬೆಳಕಲ್ಲಿ ಎಲ್ಲ ಪರಾರಿ.!
ಸಿಕ್ಕದ ಉತ್ತರಕ್ಕೆ ಪೂರ್ವಮುಖಿಯಾಗಿ
ಆಲದ ಬಿಳಲುಗಳ ಮಧ್ಯ
ಇರಬಹುದಾದ ಸ೦ಜೀವಿನಿಯ
ಹುಡುಕುತ್ತಾ ಹೊರಟವಗೆ
ಹೊತ್ತು ಹೊದದ್ದು ಎಷ್ಟು
ಯಾರಿಗೆ ಗೊತ್ತು?