Thursday, April 17, 2008

`ವಿಷಾದ ಕಾಲ' : ಒಂದು ಕವನ

ನಡು ಮಧ್ಯಾಹ್ನದಲ್ಲೂ ಆವರಿಸುವ ದಟ್ಟ ಮಂಜು.
ಅದು ಮಂಜೋ, ಪ್ಲಾಸ್ಟಿಕ್ಕಿನ ಹೊಗೆಯೋ,
ಹೊತ್ತಗೆ ಸುಟ್ಟುಹೋದ
ಕಮಟು ಪರಿಮಳವೋ ಅರಿಯದೆ
ಮನ, ಮಲಿನ ಖೋಡಿ .
ಕಸದ ಹೊಳೆಯಲಿ ಹಾಯಿದೋಣಿ ವಿಹಾರ
ಸಂದುಗಳ ಬಂಧನದಲಿ ಸಣ್ಣ ಕುಸುಕು
ಮಬ್ಬಿನಲಿ ನಿಡಿ ನೋಟಕ್ಕೂ ಸಿಗದ ಕಪ್ಪು ಸೂರ್ಯ.

ಚೆಂಗನೆ ನೆಗೆವ ಜಿಂಕೆಯ ಕೊಂದು
ಕಮ್ಮನೆ ಮಾಂಸ ಹುರಿಯಲೋಸುಗ
ಹೊಗೆಮಂಜಿನ ಅಡಿ ಕರಕಲಾಯಿತು
ಬೂದಿ ಬಾನಾಯಿತು-ಬಯಸಿ
ಹಿಟ್ಟು ನಾದಿ ನಾದಿ ನೀರಾಗಿ
ಕರಗಿ ಕರಗಿ ಬೆಣ್ಣೆನುಣುಪು

ರಾಡಿ-ಜೇಡಿ ಪದರ ತೋಡಿ
ಉಸುಕು ನಿಚ್ಛಳ
ಭಾವಜಲದೊಡಗೂಡಿ.
ನಿಶ್ಛಲ ನಿರ್ವಾತ ನಿರಂತರ

-ಅರೇಹಳ್ಳಿ ರವಿ (ಮನಸು ಹಕ್ಕಿ)

2 comments:

ತೇಜಸ್ವಿನಿ ಹೆಗಡೆ said...

ಮನಕಲಕಿದ ಕವನ!

ದೀಪಸ್ಮಿತಾ said...

ಕವನಗಳು ಚೆನ್ನಾಗಿವೆ. ಚಿತ್ರಗಳು ಹೊಂದಿಕೊಳ್ಳುತ್ತವೆ. ಚಿತ್ರಗಳನ್ನು ಬಿಡಿಸಿದವರು ಯಾರು, ನೀವು, ನಿಮ್ಮ ಸ್ನೇಹಿತರೆ? ನಾನೊಬ್ಬ ಹೊಸ ಬ್ಲಾಗಿಗ, ನನ್ನದು http://www.ini-dani.blogspot.com/. ಓದಿ ವಿಮರ್ಶಿಸಿ.