Thursday, November 01, 2007


ಕನ್ನಡ ಜನರಲ್ಲದೆ ಕನ್ನಡವನು
ಉಳಿಸುವವರಾರೈ ಬೆಳೆಸುವರಾರೈ
ಬಳಸುವರೂ ತಾವಾರಿಹರೈ?
-ಪು.ತಿ.ನ

ಕಟ್ಟುವೆವು ನಾವು ಹೊಸ ನಾಡೊಂದನು, ರಸದ
ಬೀಡೊಂದನು
ಹೊಸ ನೆತ್ತರುಕ್ಕುಕ್ಕಿ ಆರಿಹೋಗುವ ಮುನ್ನ,
ಹರಿಯದೀ ಮಾಂತ್ರಿಕನ ಮಾಟ ಮಸುಳುವ ಮುನ್ನ,
ಉತ್ಸಾಹ ಸಾಹಸದ ಉತ್ತುಂಗ ವೀಚಿಗಳ
ಈ ಕ್ಷುಬ್ಧ ಸಾಗರವು ಬತ್ತಿಹೋಗುವ ಮುನ್ನ
ಕಟ್ಟುವೆವು ನಾವು ಹೊಸ ನಾಡೊಂದನು, ರಸದ
ಬೀಡೊಂದನು..

-ಅಡಿಗರು

ಈ ಸಾಲುಗಳಿಗೆ ಅರ್ಥ ಕಲ್ಪಿಸುವುದ್ಯಾವಾಗ?

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

5 comments:

ಸಿಂಧು sindhu said...

ಪ್ರಮೋದ್,

ಮೊದಲನೆಯದಾಗಿ ರಾಜ್ಯೋತ್ಸವಕ್ಕೆ ಒಂದು ಅರ್ಥಪೂರ್ಣ ಶುಭಾಶಯ ಕೋರಿದ್ದಕ್ಕೆ ವಂದನೆಗಳು.

ನೀವು ಬರೆದ ಸಾಲುಗಳಿಗೆ ಅರ್ಥ ಕಲ್ಪಿಸುವುದು ಎಂಬ ಹೊಸ ಕೆಲಸ ಬೇಡ.

ನಮ್ಮ ದಿನದಿನದ ಎಚ್ಚರ ಮತ್ತು ಕನಸಿನ ಗಳಿಗೆಗಳಲ್ಲಿ ಕನ್ನಡವನ್ನ ಮನ್ನಿಸಿ ಮುದ್ದಿಸಿದರೆ ಕನ್ನಡ ಅಷ್ಟರ ಮಟ್ಟಿಗೆ ಜೀವಂತ ಮತ್ತು ನವನವೋನ್ಮೇಷಶಾಲಿನೀ.

ಇಷ್ಟೊಳ್ಳೆಯ ಕವಿತೆಗಳನ್ನ ನೆನಪಿಸಿ ಮನದ ಮೆತ್ತೆಯಲ್ಲಿ ವಿರಾಜಮಾನವಾಗಿರುವ ಕನ್ನಡಮ್ಮನಿಗೆ ಹೂಪುಳಕ..

ಪ್ರೀತಿಯಿಂದ
ಸಿಂಧು

Pramod P T said...

ಹಾಯ್ ಸಿಂಧು,
ನಮಸ್ಕಾರ,
ಪ್ರತಿಕ್ರಿಯೆಗೆ ಧನ್ಯವಾದಗಳು.

ನಾನು ಹೇಳಬಯಸಿದ್ದು ಇದನ್ನೇ...ಆದರೆ ಅದು ಹೊಸ ಕೆಲಸ ಎಂಬರ್ಥದಲ್ಲಲ್ಲಾ..

ನಿಮ್ಮ "ನವನವೋನ್ಮೇಷಶಾಲಿನೀ", ಇಂತಹ ಶಬ್ದಗಳಿಗೆ ಪ್ರತಿಕ್ರಯಿಸುವಷ್ಟರ ಮಟ್ಟಿಗೆ ನನ್ನ ಶಬ್ಧ ಭಂಡಾರ ವಿಸ್ತಾರವಾಗಿಲ್ಲ :)

ಧನ್ಯವಾದಗಳೊಂದಿಗೆ,
ಪ್ರಮೋದ್

Gubbacchi said...

ತುಂಬಾ ಇಷ್ಟ ಆಯಿತು....

bharat chandran said...

Hi Pramod, I reached your page to see your paintings and I ended up in same way. Couldnt read a bit, your blog forces me to learn kannada :( [by the way howz life?]

Pramod P T said...

Thank you Sujyothi:).


Hi Bhaart,
Glad to see you again, after “soliton days” :)!
I am pleased to hear your comments…Thank you!
Great thing is about your second line….I feel its really worth, to spend time to post something like this. THank you again..