Monday, April 23, 2007


'ಮೌನ' -ಭಾವನೆಗಳ ದ್ವಂದ್ವ!
'silence' - split feelings!

ಜಯಶ್ರೀ ಯವರ ಅಧ್ಬುತ ಕವನ 'ಮೌನ' ದಿಂದ ಪ್ರೇರಣೆಗೊಂಡು...
inspired by the poem 'mouna' (silence)...
oil on canvas

9 comments:

ಭಾವಜೀವಿ... said...

ಕಣ್ಸೆಳೆಯುವಂತಿದೆ ಪ್ರಮೋದ್!!
ಚಿತ್ರ ಹಾಗು ಬಣ್ಣಗಳ ವಿಷಯದಲ್ಲಿ ನಾನು ಒಂದಿಷ್ಟು ಪಾಮರ! ಅದರಿಂದ ಇಲ್ಲಿ ನನಗೊಂದು ಸ್ಪಷ್ಟವಾಗಿಲ್ಲ, ಇಲ್ಲಿ ಮೌನವನ್ನು ಪ್ರಧಾನವಾಗಿಸಲು ಉದ್ದೇಶಪೂರ್ವಕವಾಗಿ ಕಣ್ಣು ಮೂಗು ಹಾಗು ಬಾಯಿಗಳನ್ನು ನಿರ್ಲಕ್ಷಿಸಲಾಗಿದೆಯೆ!? ಹಿಂದಿನ ನೀಲಿ ವರ್ಣ ಮೌನದಡಿಯಲ್ಲಿನ ದುಃಖಕ್ಕೆ ಪೂರವಾಗಿದೆಯೇ!?

Sushrutha Dodderi said...

ಕವನಕ್ಕಿಂತ ಚೆನ್ನಾಗಿದೆ ಚಿತ್ರ ಎನ್ನಲೇ? ಇಲ್ಲಾ, ಕವನವೇ ಚಿತ್ರಕ್ಕಿಂತ ಚೆನ್ನಾಗಿದೆ ಎನ್ನಲೇ? ಬಹುಶಃ ಏನೂ ಹೇಳದೆ ಸುಮ್ಮನಿರುವುದೇ ಲೇಸು: ಏಕೆಂದರೆ, ಇದು 'ಮೌನ'ದ ವಿಷಯ...! :)

Unknown said...

r u looking for life partner who is unknown till data??? :)

ಮನಸ್ವಿನಿ said...

ಚಿತ್ರ ಚೆನ್ನಾಗಿದೆ...ಆದ್ರೆ, ನಂಗೆ ಸ್ವಲ್ಪ ವಿವರಣೆ ನೀಡಿ ಸರ್

ಹಾಡಿಗೂ, ಚಿತ್ರಕ್ಕೂ ಹೋಲಿಕೆ ಹೇಗಾಗುತ್ತೆ ಅಂತ

Pramod P T said...

ಸ್ನೇಹಿತರೇ,
ನಿಮ್ಮೆಲ್ಲರ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು.
ಈ ಚಿತ್ರದ ವಿಶ್ಲೆಷಣೆಗೆ ಪೀಠಿಕೆ ಅಗತ್ಯವಿಲ್ಲವೆಂದೆನಿಸುತ್ತಿದೆ. ಆದರೂ ಚಿಕ್ಕದಾಗಿ...ನನ್ನ ಖುಷಿಗೆ!

'ಮೌನ', ನನಗೆ ಬಹುಕಾಲದಿಂದ ಕಾಡಿದ ಕನಸು.
ಮೌನವನ್ನ ಚಿತ್ರಿಸುವುದು ಹೇಗೆ, ಬಣ್ಣಗಳಲ್ಲಿ ವ್ಯಕ್ತ ಪಡಿಸುವುದು ಹೇಗೆ ಅಂತೆಲ್ಲಾ ತಲೆಕೆಡಿಸಿಕೊಂಡಿದ್ದಾಗಲೇ ಜಯಶ್ರೀಯವರ 'ಮೌನ' ನನ್ನ ಕೈ ಸೇರಿತು.(ಅವರ ಬ್ಲಾಗ್ ಇಲ್ಲದ ಕಾರಣ ಈ ಬ್ಲಾಗ್ನಲ್ಲೇ ಅವರ ಅನುಮತಿಯೊಂದಿಗೆ ಕವನವನ್ನ ಭಟ್ಟಿ ಇಳಿಸಿದ್ದೇನೆ)

ಕವನದಲ್ಲಿನ ಒಂದು ಸಾಲು 'ಮೌನ- ಭಾವನೆಗಳ ದ್ವಂದ್ವ' ತುಂಬಾ ಇಷ್ಟವಾದ ಕಾರಣ, ಅದನ್ನೇ ಮುಖ್ಯ ವಿಷಯವನ್ನಾಗಿರಿಸಿಕೊಂಡು, ಇನ್ಕೆಲವು ಸಾಲುಗಳನ್ನ ಬಳಸಿಕೊಂಡು ಚಿತ್ರಿಸಲಾಗಿದೆ (ಮನಸ್ವಿನಿಯವರ ಪ್ರತಿಕ್ರಿಯೆಗೆ....ಕವನಕ್ಕಾಗಿ ಚಿತ್ರ ಅಲ್ಲಾ, ಕವನದಲ್ಲಿನ ಇನ್ನೂ ಎಷ್ಟೋ ವಿಷಯಗಳು ಚಿತ್ರದಲ್ಲಿಲ್ಲ).

ಹಿಂದಿನ ನೀಲಿ ವರ್ಣ ಮಾನಸ ಸರೋವರದ ಪ್ರಶಾಂತತೆಯನ್ನ, ಹಾಗು ಅಲ್ಲಲ್ಲಿ ತಿಳಿ ನೇರಳೆ ವರ್ಣದ ಲೇಪನ ಚಂಡಮಾರುತದ ಮುನ್ಸೂಚನೆಯನ್ನ ಸೂಚಿಸುತ್ತಿದೆ. (ಶಂಕರ್...ಇದ್ಯಾವುದರಲ್ಲೂ ನೋವಿನ ಅಂಶ ಇಲ್ಲಾ. ಮೌನದಡಿಯಲ್ಲಿನ ದುಃಖಕ್ಕೆ ಪೂರಕವಾಗಿಲ್ಲ).

ಇನ್ನು, ಮುಖ್ಯವಾಗಿ ಭಾವನೆಗಳ ದ್ವಂದ್ವ( "split feelings") ವನ್ನ ಚಿತ್ರಿಸಲು ಮೊದಮೊದಲು ತುಂಬಾ ಕಷ್ಟವಾಯಿತು . ಬೇರೆ ಬೇರೆ ರೀತಿಯ ಭಾವನೆಗಳನ್ನ (ಆಂತರಿಕ), ಎಲ್ಲಾ ರೀತಿಯ ವರ್ಣಗಳನ್ನ ಮನಬಂದಂತೆ ಎರಚಲಾಗಿದೆ.(brush strokes ನ rhythm ಗೆನೂ ಅಡ್ಡಿಯಾಗದಂತೆ!)

ಶಂಕರ್ ಪ್ರತಿಕ್ರಯಿಸಿದಂತೆ ಇಲ್ಲಿ ಮೌನವನ್ನು ಪ್ರಧಾನವಾಗಿಸಲು ಉದ್ದೇಶಪೂರ್ವಕವಾಗಿ ಕಣ್ಣು ಮೂಗು ಹಾಗು ಬಾಯಿಗಳನ್ನು ನಿರ್ಲಕ್ಷಿಸಲಾಗಿದೆ. ಭಾವನೆಗಳ ದ್ವಂದ್ವದ ಫಲಿತಾಂಶವೇ ಚಿಕ್ಕ ಹುಡುಗಿಯ ಮುಖ (ಭಾಹ್ಯ ಮೌನ). ಅವಳ ಎರಡು ಜಡೆಗಳನ್ನ ಉದ್ದೇಶಪೂರ್ವಕವಾಗಿ ಚಿತ್ರಿಸಿದ್ದಲ್ಲ.

ಕೊನೆಯದಾಗಿ 'ಬಲಜಡೆಯನ್ನ ಹಿಡಿದಿರುವ ಕೈ', ಮನಸ್ಸಿನ ಹಿಡಿತಕ್ಕೆ (mind control) ಹೋಲಿಸಲಾಗಿದೆ. ಇಲ್ಲಿ ಕೈ ಎಂಬುದು ಮನಸ್ಸು (mind). ಮೌನದ ಕೊನೆಯ ಹಂತವನ್ನ ತಲುಪುವವರೆಗಿನ ಮನಸ್ಸಿನ ಸ್ಥಿತಿಯನ್ನ ಬಿಂಬಿಸುವ ಉದ್ದೇಶದಿಂದ!

ನಿಮ್ಮ ಗಮನಕ್ಕೆ: ಮೊದಲು ಕವನಕ್ಕಾಗಿಯೇ ಚಿತ್ರಿಸಬೇಕೆಂದುಕೊಂಡಿದ್ದೆ. ಕವನದ ಗಂಭೀರತೆಯನ್ನ ಚಿತ್ರದ ಮೂಲಕ ಹಿಡಿದಿಡಲು ನನ್ನಿಂದ ಕಷ್ಟಸಾಧ್ಯವಾದ್ದರಿಂದ, ಆ ಮೂರು ಸಾಲುಗಳನ್ನ ಮಾತ್ರ ಬಳಸಿಕೊಂಡಿದ್ದೇನೆ. ಇಲ್ಲಿನ ಪದ ಬಳಕೆ, ಪದಗಳ ಜೋಡಣೆ ಯಲ್ಲಿ ಎನೇ ತಪ್ಪಿದ್ದರೂ ತಿದ್ದಿ. ಬರಹಗಳ ಮೂಲಕ ಚಿತ್ರದ ವಿಶ್ಲೇಷಣೆ ತುಂಬಾ ಕಷ್ಟ(ನನಗೆ!).

ಧನ್ಯವಾದಗಳೊಂದಿಗೆ,
ಪ್ರಮೋದ್

Pramod P T said...

ಸುಶ್ರುತರೇ,

ಧನ್ಯವಾದಗಳು.
ನೀವು ಮೌನವಾಗಿದ್ದರೆ ಬ್ಲಾಗ್-ಗೆ ಶೋಭೆ ನೆ ಇರೊಲ್ಲಾ..!

Pramod P T said...

hey raj,

that is true in one angle :)...
cool comment..hmm

Gubbacchi said...

Your explanations and the painting are really toooooooo good.

Anonymous said...

spellbinding work. Even I cann't explain poem like that.