Thursday, April 16, 2009

‘repose’ a reproduction work. Oil on canvas 24” x 30”
original by John Fernandes
ನಗು ಎಲ್ಲೊ ಮರೆಯಾಗುತಿದೆ
ಕಣ್ಣು ಎನೊ ಹುಡುಕುತಿದೆ
ಮಣ್ಣಿಗೆ ತನ್ನನು ಅರ್ಪಿಸಬೇಕೆನುತಿದೆಯೊ!
ಮನದಲಿ ಯಾರನೊ ಸ್ವೀಕರಿಸಬೇಕೆನುತಿದೆಯೊ
ನೂರು ಆಸೆ ಅಧುಗಿಹುದು ಲತೆಯಲಿ
ಸಾವಿರ ಪ್ರಶ್ನೆ ಇರುವುದು ನೋಟದಲಿ
ನೀರಲ್ಲಿ ಮೀನಿನ ಹೆಜ್ಜೆ ಗುರುತಿಸಬಹುದು, ಹೆಣ್ಣಿನ ಮನಸ್ಸು ಅರಿಯಲಾಗುವುದೆ?
-ಶಿವರಂಜನ್ ಜಿ

Thursday, March 19, 2009

ಟ್ರೈ ಮಾಡಿ..

Friday, December 12, 2008

ಪರ್ಯಾಯಕ್ಕೊಂದು ಪ್ರಯೋಗ

'ಘಟಶ್ರಾದ್ಧ'... ಅನಂತಮೂರ್ತಿಯವರ ನೀಳ್ಗತೆಯನ್ನಾಧರಿಸಿ, ಕಾಸರವಳ್ಳಿಯವರು ತಮ್ಮದೇ ಶೈಲಿಯಲ್ಲಿ ನಿರ್ದೇಶಿಸಿದ ಮೊದಲ ಸಿನಿಮಾ. ಸಾಹಿತ್ಯ ಹಾಗೂ ಸಿನೆಮಾ ಇವೆರಡರದ್ದು ಹತ್ತಿರದ ನಂಟು. ಭಾವನೆಗಳನ್ನ ತಮ್ಮದೇ ಆದ ರೀತಿಯಲ್ಲಿ ನಿರೂಪಿಸುತ್ತವೆ. ಪುಟಗಟ್ಟಲೆ ಇದ್ದ ಕಥೆಯೊಂದು ಬೆಳ್ಳಿ ಪರದೆಯ ಮೇಲೆ ಮುದುಡಿ ಮೂಡುತ್ತದೆ. ಆ ಭಾವನೆಯ ಬಣ್ಣಗಳನ್ನೆಲ್ಲ ದೊಡ್ಡ ಪರದೆಯಿಂದ ಪುಟ್ಟ ಕ್ಯಾನ್ವಾಸ್ ಮೇಲೆ ಮೂಡಿಸುವ ಪ್ರಯತ್ನ ಇಲ್ಲಿದೆ. ಕಾಸರವಳ್ಳಿ ಹಾಗೂ ಅನಂತ ಮೂರ್ತಿಯವರ ಅನನ್ಯ ಸೃಜನಶೀಲ ಕೃತಿಗೆ ಕನ್ನಡ ಸಾಹಿತ್ಯ.ಕಾಂ ಹಾಗೂ ಸಂವಾದ.ಕಾಂ ಪರವಾಗಿ ಗೌರವ ಸಲ್ಲಿಸುವ ಒಂದು ಪ್ರಾಮಾಣಿಕ ಯತ್ನ. ಇಂತಹದೊಂದು ವಿಭಿನ್ನ ಪ್ರಯೋಗವು ಯಶಸ್ವಿಯಾಗಲು ಪ್ರಾರಂಭದ ಹಂತದಿಂದಲೂ ಸಹಕರಿಸಿದವರು ಸಂವಾದದ ಸಾರಥಿ ಶೇಖರ್ ಪೂರ್ಣ. ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.
ಕತೆಯಲ್ಲಿನ ಗಂಭೀರತೆ, ಮನಸ್ಸಿಗೆ ನಾಟುವ ತಿಳಿಯಾದ ನಿರೂಪಣೆ, ಅದರಲ್ಲಿ ಅಡಗಿದ ಒಳಾರ್ಥ ಎಷ್ಟರ ಮಟ್ಟಿಗೆ ಚಿತ್ರಗಳಲ್ಲಿ ಹುದುಗಿದೆಯೊ ಗೊತ್ತಿಲ್ಲ. ಸಿನಿಮಾ ನೋಡಲು ಅವಕಾಶ ಸಿಗದವರಿಗೊಂದು ಚಿತ್ರದ ಮೂಲಕ ಸಂವೇದನೆ.

Ghatashraddha (The Ritual) was Girish Kasaravalli's first film as a director. The Film was based on a novel by eminent Kannada writer U R Ananthamurthy. It won the 1978 National Film Award for Best Film and in 2002 became the only India film at the Film Archive of Paris, selected for the Cinema hundredth anniversary celebrations, amongst one of the best 100 in the world.
Literature and cinema are very closely related. Depiction of emotions has its own way in both of them.Here I've tried to unveil those emotions on a canvas. We thought this is the best way to respect and cherish the incredible work of Girish Kasaravalli and U R Ananthamurthy. This couldn't have been possible without our samvaada saarathi Shekhar Poorna. I'm grateful to Shekhar Poorna for his endless encouragement and cooperation.
It's difficult to paint what a character goes through in a film. Still it's my sincere effort to bring all emotional colors of Ghatashraddha from big screen to a small canvas.
ತರ್ಕಶ್ರಾದ್ಧ
cerebrate (oil on canvas 24" x 30")


ಸಹನೆಯ ಸೀಮೆ
brook (acrylic on canvas 18" x 24")
SOLD
ಹತಾಶೆಯ ಬಿಂಬಗಳು
frustration (oil on canvas 18" x24")
ಘಟಶ್ರಾದ್ಧ
rituals of excommunication
(mixed media on canvas 24" x 36")
ಘಟಶ್ರಾದ್ಧ
rituals of excommunication
(oil on canvas 24" x 36")
ತರ್ಕಶ್ರಾದ್ಧ
cerebrate (oil on canvas 18" x 36")
ಸೂತ್ರವಿರದ ಪಾತ್ರ
virtues of life (acrylic on canvas 30" x 24")
SOLD

Wednesday, November 19, 2008

"ನನ್ನ ಸಂದರ್ಭದಲ್ಲಿ ಪರ್ಯಾಯ ಸಿನಿಮಾ"
ಗಿರೀಶ್ ಕಾಸರವಳ್ಳಿಯವರ ಗೌರವಾರ್ಥ
ಸಿನಿಮಾ ರಸಗ್ರಹಣ ಶಿಬಿರ - ಚಿಂತನಾ ಕೂಟ
ಇದು ಕನ್ನಡ ಸಾಹಿತ್ಯ.ಕಾಂ ಮತ್ತು ಸಂವಾದ.ಕಾಂ ನ ಪ್ರಸ್ತುತಿ

Friday, October 31, 2008

Sounds Of the Brush
Art Show

Tuesday, October 28, 2008

' ರಾಷ್ಟ್ರೀಯ ಅಂಚೆ ಸಪ್ತಾಹ'ದ ಅಂಗವಾಗಿ ರಚಿಸಿದ ಚಿತ್ರ
the next museum piece!
(acrylic on canvas 24"x30")

Monday, July 14, 2008

a light touch with the pen..

indian express 5.7.08
kannaDaprabha 6.7.08
udayavaaNi 6.7.08
prize!
acrylic on canvas 20" x 30"
dream hunter
acrylic on canvas 24" x 36"
SOLD

stargaze!
acrylic on canvas 24" x 36"
SOLD
virtues of life 2!
acrylic on canvas 18" x 24"

Thursday, July 03, 2008

ಮಾನ್ಯರೇ,
ಎಸ್. ಒ. ಎಸ್. ಮಕ್ಕಳ ಗ್ರಾಮದ ಸಹಾಯ ನಿಧಿಯ ಉದ್ದೇಶದಿಂದ ಭಾವನೆಗಳಿಗೆ ಬಣ್ಣದ ಚಿತ್ತಾರ ಬೆರಸಿ, ಒಡಮೂಡಿದ ಕಲಾಕೃತಿಗಳನ್ನು ಕಣ್ತುಂಬ ನೋಡಿ, ಮನತುಂಬಾ ಹರಸುವಿರೆಂಬ ಆಶಯದೊಂದಿಗೆ ನಿಮ್ಮನ್ನು ನಮ್ಮ ಚಿತ್ರ ಪ್ರದರ್ಶನ ಕಾರ್ಯಕ್ರಮಕ್ಕೆ ಆಹ್ವಾನ ನೀಡುತ್ತಿದ್ದೇನೆ.

ಚಿತ್ರ ಪ್ರದರ್ಶನ : ಸ್ತ್ರೀತ್ವದ ಚಿತ್ರ ವ್ಯಾಖ್ಯೆಶಿಲ್ಪ
ಕಲಾಕೃತಿಗಳ ಪ್ರದರ್ಶನ : ಬಾಲಕಾಂಡದ ಮೋಜು ಹಾಗೂ ಕಲ್ಪನೆ

ಉದ್ಘಾಟಕರು : ಶ್ರೀ ಕೆ.ವಿ. ಸುಬ್ರಮಣ್ಯಂ,
ಖ್ಯಾತ ವಿಮರ್ಶಕರು

ಅತಿಥಿಗಳು : ಶ್ರೀ ಎಂ. ಕೆ. ಲೋಕೇಶ್,
ನಿರ್ದೇಶಕರು,
ಎಸ್.ಓ.ಎಸ್. ಮಕ್ಕಳ ಗ್ರಾಮ.

ಜುಲೈ 3 ರ, ಬೆಳಿಗ್ಗೆ 11 ಗಂಟೆಗೆ
ಚಿತ್ರಕಲಾ ಪರಿಷತ್, ಗ್ಯಾಲರಿ -1,
ಕುಮಾರ ಕ್ರಪ ರಸ್ತೆ, ಬೆಂಗಳೂರು-560001

ನನ್ನೊಂದಿಗೆ ಕುಂಚಕಲಾವಿದರಾದ ಸಿ.ಎಸ್.ಶಶಿಧರ್, ಜೆ. ಕಡೂರ್, ರಾಘ್ ಪುತ್ತೂರ್ ಹಾಗೂ ಶಿಲ್ಪಿ ಡಿ. ರಂಗಸ್ವಾಮಿ ನಿಮ್ಮ ಬರುವಿಕೆಗಾಗಿ ದಾರಿ ಕಾಯುತ್ತಿರುತ್ತೇವೆ.
ಪ್ರದರ್ಶನವು ದಿನಾಂಕ 3,4,5 ಹಾಗೂ 6 ರ ಜುಲೈ 2008 ಬೆಳಗ್ಗೆ 10 ರಿಂದ ಸಂಜೆ 7 ರ ವರೆಗೆ ತೆರೆದಿರುತ್ತದೆ.
ನಿಮ್ಮವ,
ಪ್ರಮೋದ್. ಪಿ. ಟಿ

Thursday, April 17, 2008

`ವಿಷಾದ ಕಾಲ' : ಒಂದು ಕವನ

ನಡು ಮಧ್ಯಾಹ್ನದಲ್ಲೂ ಆವರಿಸುವ ದಟ್ಟ ಮಂಜು.
ಅದು ಮಂಜೋ, ಪ್ಲಾಸ್ಟಿಕ್ಕಿನ ಹೊಗೆಯೋ,
ಹೊತ್ತಗೆ ಸುಟ್ಟುಹೋದ
ಕಮಟು ಪರಿಮಳವೋ ಅರಿಯದೆ
ಮನ, ಮಲಿನ ಖೋಡಿ .
ಕಸದ ಹೊಳೆಯಲಿ ಹಾಯಿದೋಣಿ ವಿಹಾರ
ಸಂದುಗಳ ಬಂಧನದಲಿ ಸಣ್ಣ ಕುಸುಕು
ಮಬ್ಬಿನಲಿ ನಿಡಿ ನೋಟಕ್ಕೂ ಸಿಗದ ಕಪ್ಪು ಸೂರ್ಯ.

ಚೆಂಗನೆ ನೆಗೆವ ಜಿಂಕೆಯ ಕೊಂದು
ಕಮ್ಮನೆ ಮಾಂಸ ಹುರಿಯಲೋಸುಗ
ಹೊಗೆಮಂಜಿನ ಅಡಿ ಕರಕಲಾಯಿತು
ಬೂದಿ ಬಾನಾಯಿತು-ಬಯಸಿ
ಹಿಟ್ಟು ನಾದಿ ನಾದಿ ನೀರಾಗಿ
ಕರಗಿ ಕರಗಿ ಬೆಣ್ಣೆನುಣುಪು

ರಾಡಿ-ಜೇಡಿ ಪದರ ತೋಡಿ
ಉಸುಕು ನಿಚ್ಛಳ
ಭಾವಜಲದೊಡಗೂಡಿ.
ನಿಶ್ಛಲ ನಿರ್ವಾತ ನಿರಂತರ

-ಅರೇಹಳ್ಳಿ ರವಿ (ಮನಸು ಹಕ್ಕಿ)

Wednesday, April 09, 2008

late Shri. Basavarj Dollin