Wednesday, October 11, 2006

ಕಣ್ಣಿನಾಟ ಕಣ್ಣಿಗುಂಟು, ಗಾಳದಾಟ ಗಾಳಕೆ,
ಎಲ್ಲವನ್ನು ಸೋಲಬಹುದು, ನೀನು ಎಸೆದ ದಾಳಕೆ!
-ಎಚ್.ಎಸ್.ವಿ
(oil on canvas)

10 comments:

Gubbacchi said...

I think it is......
ಎಲ್ಲವೂ ಸೋಲಬಹುದು ಅಥವಾ ಎಲ್ಲವನ್ನು ಸೋಲಿಸಬಹುದು.
Nice painting :)

Pramod P T said...

sariyaage ideyallaa..!gubbacchi (hesaru muddaagide).
lyrics: Dr. H S Venkateshmurthy yavaraddu.
Thank you so much for the appreciation and having a look to my paintings.

Phantom said...

ಪ್ರಮೋದ್,

ಈ ಚಿತ್ರ ಅರ್ಥವಾಗಲಿಲ್ಲ. ದಯವಿಟ್ಟು ವಿಷ್ಲೇಶಿಸುವಿರಾ?

ಭೂತ

ಶ್ರೀನಿಧಿ.ಡಿ.ಎಸ್ said...

ನಮಸ್ತೆ ಪ್ರಮೋದ್,
ಎಲ್ಲೋ ಬ್ಲಾಗುಗಳ ಲೋಕದಲ್ಲಿ ಸುತ್ತುವಾಗ, ನಿಮ್ಮ ಬ್ಲಾಗು ಸಿಕ್ಕಿತು! ಬಹು ಚೆಂದವಿದೆ! ಬಣ್ಣ ಮತ್ತು ಕಾವ್ಯವನ್ನ ಬೆರೆಸಿದ ಬಗೆ, ಅನನ್ಯ!
ಬೆಳಗ್ಗೆ ಆಫೀಸಿಗೆ ಬಂದ ಕೂಡಲೆ ನಿಮ್ಮ ಬ್ಲಾಗು ಸಿಕ್ಕಿ, ಮನಸ್ಸು ನಿರಾಳವಾದಂತಾಯಿತು. u made my day!

Pramod P T said...

@ಭೂತ,

paintings-ಗಳು (ಇದನ್ನ ಅಮೂರ್ತ ಕಲೆ ಅನ್ನಬಹುದು) ಸಮಯ, ಸಂಧರ್ಭಕ್ಕನುಗುಣವಾಗಿ ರಚಿತವಾಗಿರುತ್ತವೆ. ಈ painting-ನ ಅರ್ಥ ಇಷ್ಟೇ! ವಿರಹದ ಬೇಗೆಯಿಂದ ಬಳಲುತ್ತಿರುವ ಹುಡುಗನ ಭಾವನೆಗಳನ್ನ ವ್ಯಕ್ತಪಡಿಸಿರುವಂತದ್ದು. ಇಲ್ಲಿ ಗಾಳವನ್ನ ಹುಡುಗಿಗೆ(ಚಿತ್ರದ ಎಡಭಾಗದಲ್ಲಿ) ಮತ್ತು ಕಣ್ಣನ್ನ ಹುಡುಗನಿಗೆ(ಚಿತ್ರದ ಬಲಭಾಗದಲ್ಲಿ) ಹೋಲಿಸಿದ್ದೇನೆ.ಮಧ್ಯದಲ್ಲಿ ಅವರಿಬ್ಬರ ಒಡನಾಟವಿದೆ. ಇದನ್ನ ಪಗಡೆಯಾಟಕ್ಕೆ ಹೋಲಿಸಿದ್ದೇನೆ (ಆ ಒಡನಾಟದಲ್ಲಿ ಹುಡುಗನು ಸೋತಿದ್ದಾನೆ).

ನಿಜ ಹೇಳಬೇಕೆಂದರೆ, ನಾನು ಯಾವುದೋ ವಿಷಯದಲ್ಲಿ ತುಂಬಾ ಬೇಸರದಲ್ಲಿದ್ದಾಗ ರಚಿಸಿದ್ದು(ಸಂದರ್ಭಕ್ಕನುಗುಣವಾಗಿ :) ). ಈ ಚಿತ್ರ ಎಲ್ಲರಿಗೂ ಅರ್ಥ ಆಗಬೇಕೆಂಬ ಕಾರಣದಿಂದ H.S.K-ಯವರ ಸಾಲುಗಳನ್ನ ಸೇರಿಸಿದ್ದೇನೆ.

ಈ ಎರಡು ಸಾಲಿನಲ್ಲಿರುವ ಪ್ರತಿಯೊಂದು ವಸ್ತುಗಳು ಚಿತ್ರದಲ್ಲಿ ಕಾಣಿಸದಿದ್ದರೂ ನನ್ನ ಚಿತ್ರದಲ್ಲಿರುವ ಭಾವನೆಗಳನ್ನ ಈ ಸಾಲುಗಳು ಹೇಳುತ್ತವೆ.

ಭೂತರವರೇ, ನಿಮ್ಮ ಅಭಿರುಚಿಗೆ ಧನ್ಯವಾದಗಳು!
ಇನ್ನೂ ಯಾವುದಾದರೂ paintings ಅರ್ಥ ಆಗದಿದ್ದರೆ ದಯವಿಟ್ಟು ತಿಳಿಸಿ.
ಧನ್ಯವಾದಗಳು.
ಪ್ರಮೋದ್

Pramod P T said...

@anand,
ಗೆಳೆಯಾ,
ತುಂಬಾ ಸಂತೋಷ, ಧನಾತ್ನಕವಾಗಿ ವಿಷ್ಲೇಶಿಸಿದ್ದಿಯಲ್ಲಾ!!

@ಶ್ರೀನಿಧಿ,
ಚಿತ್ರಕ್ಕೆ ಕಾವ್ಯವನ್ನ ಬೆರೆಸಲು ನನಗೆ ತುಂಬಾ ಸ್ನೇಹಿತರು ಸಹಾಯ ಮಾಡಿದ್ದಾರೆ. ನನ್ನ ಈ ಬ್ಲಾಗ್-ನಿಂದ ನಿಮ್ಮ ಮನಸ್ಸು ಹಗುರವಾಯಿತೆಂದರೆ ಅದಕ್ಕಿಂತ ಖುಶಿ ಇನ್ನೊಂದಿಲ್ಲಾ!
ಧನ್ಯವಾದಗಳು.

ಪ್ರಮೋದ್

Sushrutha Dodderi said...

ನಿಮ್ಮೆಲ್ಲ ಚಿತ್ರಗಳು ತುಂಬಾ ತುಂಬಾ ಚೆನ್ನಾಗಿವೆ. ಅವಾಗಿವಾಗ ನೋಡುತ್ತಿದ್ದೆ. ಆದರೆ ಈ ಚಿತ್ರವನ್ನು, ಜೊತೆಗೆ ಹೆಚ್ಚೆಸ್ವಿಯವರ ಕವಿತೆಯ ಸಾಲುಗಳನ್ನು ಓದಿದ ಮೇಲೆ ನಿಮ್ಮನ್ನು ಅಭಿನಂದಿಸದೇ ಇರಲಾಗಲಿಲ್ಲ. ಕಾವ್ಯದ ಪಯಣವನ್ನು ಚಿತ್ರಗಳ ಮೂಲಕ ಹಗುರಗೊಳಿಸುವ ಮತ್ತು ಆತ್ಮೀಯಗೊಳಿಸುವ ನಿಮ್ಮ ರೀತಿಗೆ ಶರಣು.

ಅಂದ್ಹಾಗೆ, ನಿಮ್ಮ ಬ್ಲಾಗಿನ linkಅನ್ನು ನನ್ನ ಬ್ಲಾಗಿನಲ್ಲಿ ಸೇರಿಸುತ್ತಿದ್ದೇನೆ: ನೀವು ಆಕ್ಷೇಪಿಸಲಾರಿರಿ ಎಂಬ ಭರವಸೆಯೊಂದಿಗೆ.

ಧನ್ಯವಾದಗಳು.

Pramod P T said...

ತುಂಬಾ ತುಂಬಾ ಧನ್ಯವಾದಗಳು, ಶುಶ್ರುತರವರೇ,

ಅಂದ್ಹಾಗೆ, ಆಕ್ಷೇಪಣೆಯ ಮಾತೇ ಇಲ್ಲಾ :)
ಧಾರಾಳವಾಗಿ ನನ್ನ ಬ್ಲಾಗಿನ linkಅನ್ನು ನಿಮ್ಮ ಬ್ಲಾಗಿನಲ್ಲಿ ಸೇರಿಸಿ. ಈ ಬ್ಲಾಗ್ creat ಮಾಡಿದ್ದಕ್ಕೂ ಸಾರ್ಥಕವಾಯ್ತು!

Gubbacchi said...

I listened to this song from which you have taken these lines...
painting & song both are meaningful.

Anonymous said...

e chitra nanna drushtige nilukaddu,
adaralli ondu hennina mattu ondu gandina muka bittare adara ottu chitra nanage tileelilla